ಕೋಲಾರದ ಬಗ್ಗೆ

ಕೋಲಾರವು 13.13 ° N 78.13 ° E ನಲ್ಲಿ ಸ್ಥಳನೇಮಿಸಿದೆ. [2] ಇದು ಸರಾಸರಿ 822 ಮೀಟರ್ ಎತ್ತರದಲ್ಲಿದೆ (2,697 ಅಡಿಗಲು).
ಇದು ಬೆಂಗಳೂರಿನಿಂದ ಸುಮಾರು 72 ಕಿಲೋಮೀಟರ್ (45 ಮೈಲಿ) ದೂರದಲ್ಲಿದೆ ಮತ್ತು ಕೋಲಾರ ಗೋಲ್ಡ್ ಫೀಲ್ಡ್ಸ್ ನಿಂದ 32 ಕಿಲೋಮೀಟರ್ (20 ಮೈಲಿ) ದೂರದಲ್ಲಿದೆ. ಈ ನಗರವು ಕರ್ನಾಟಕದ ಪ್ರದೇಶದ ದಕ್ಷಿಣ ಮೈದಾನ (ಬಯಲು ಪ್ರದೇಶ) ಮೇಲೆ ನೆಲೆಗೊಂಡಿದೆ. ಅಮ್ಮೇರಳ್ಳಿ ಕೆರೆಯು ಕೋಲಾರದ ಪೂರ್ವ ಗಡಿಯನ್ನು ರೂಪಿಸುತ್ತದೆ. ಉತ್ತರಕ್ಕೆ ಕೊಡಿಕಣ್ಣೂರು ಕೆರೆಯು, ನಗರಕ್ಕೆ ನೀರಿನ ಪೂರೈಕೆಯ ಪ್ರಮುಖ ಮೂಲವಾಗಿದೆ. ಹತ್ತಿರದ ರೈಲ್ವೇ ಜಂಕ್ಷನ್ 15 ಕಿ.ಮೀ ದೂರದಲ್ಲಿ ಬಂಗಾರಪೇಟೆಯಲ್ಲಿ ಇದೆ. ಇದು ಬೆಂಗಳೂರಿನಿಂದ ಚೆನ್ನೈ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಇದೆ.

2011 ರ ಜನಗಣತಿಯಂತೆ, ಕೋಲಾರ ಪುರಸಭೆಯು 138,553 ಜನಸಂಖ್ಯೆಯನ್ನು ಹೊಂದಿತ್ತು.[1] ಪುರಸಭೆಯು 1000 ಪುರುಷರಿಗೆ 978 ಹೆಣ್ಣು ಮಕ್ಕಳ ಅನುಪಾತವನ್ನು ಹೊಂದಿದ್ದು, ಜನಸಂಖ್ಯೆಯ 11.5% ರಷ್ಟು ಆರು ವರ್ಷದೊಳಗಿನವರು ಇದ್ದಾರೆ.ಪರಿಣಾಮಕಾರಿ ಸಾಕ್ಷರತೆ 84.02% ಆಗಿತ್ತು; ಪುರುಷ ಸಾಕ್ಷರತೆ 87.28% ಮತ್ತು ಸ್ತ್ರೀ ಸಾಕ್ಷರತೆ 80.69% ಇದೆ.

ಕನ್ನಡವು ಪ್ರಮುಖ ಭಾಷೆಯಾಗಿದೆ, ಆದರೆ ಗಮನಾರ್ಹ ಜನಸಂಖ್ಯೆ ತೆಲುಗು ಮಾತನಾಡುತ್ತಾರೆ. ಕೆ.ಜಿ.ಎಫ್ ನಂತಹ ಕೆಲವು ಸ್ಥಳಗಳಲ್ಲಿ ತಮಿಳನ್ನೂ ಮಾತನಾಡುತ್ತಾರೆ.

ಕೋಲಾರವನ್ನು ತಲುಪುವುದು ಹೇಗೆ?

ಫ್ಲೈಟ್ ಮೂಲಕ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಮೀಪದ ವಿಮಾನ ನಿಲ್ದಾಣವಾಗಿದೆ ಹಾಗು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೋಂದು ವಿಮಾನ ನಿಲ್ದಾಣವಾಗಿದೆ.

ರೈಲಿನಿಂದ
ಹತ್ತಿರದ ರೈಲ್ವೇ ಜಂಕ್ಷನ್ 15 ಕಿ.ಮೀ ದೂರದಲ್ಲಿ ಬಂಗಾರಪೇಟೆಯಲ್ಲಿ ಇದೆ.

ರಸ್ತೆ ಮೂಲಕ
ಕೋಲಾರ ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ಪಟ್ಟಣವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಆಯೋಜಕ ಸೇವೆಗಳು ಕೋಲಾರನ್ನು ನೆರೆಯ ನಗರಗಳೊಂದಿಗೆ ಸಂಪರ್ಕಿಸುತ್ತವೆ.